ಮುದ್ಗಲ್ , ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಒಂದು
ಪುಟ್ಟ ಪಟ್ಟಣ. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ತನ್ನ ಮಡಿಲಲ್ಲಿ ಇನ್ನೂ
ಹಿಡಿದಿಟ್ಟುಕೊಂಡು, ತನ್ನ ಎರಡು ಸುತ್ತಿನ ಕೋಟೆಯಲ್ಲಿ ಆಶ್ರಯ ಪಡೆದ ಜನರ
ದೌರ್ಜನ್ಯವನ್ನು ಸಹಿಸಿಕೊಂಡು ಬಂದಿದೆ. ಸರಕಾರದ , ಹಾಗು ತನ್ನಲ್ಲಿ ವಾಸಿಸುವ ಜನರ
ದಿವ್ಯ ನಿರ್ಲಕ್ಷದ ಮಧ್ಯೆಯೂ ತನ್ನ ಸುಂದರತೆಯನ್ನು ಕಳೆದುಕೊಳ್ಳದಿರಲು ಹೆಣಗುತ್ತಿದೆ.
ಈ ಎರಡು ಸುತ್ತಿನ ಕೋಟೆಯ ಪಶ್ಚಿಮ ಭಾಗದ ಕೊನೆಯಲ್ಲಿ ಶ್ರೀ ಅಶ್ವತ್ಥನಾರಾಯಣ ದೇವರ ಸನ್ನಿಧಾನವಿದೆ. ಹಿಂದೊಮ್ಮ

ೆ
ಇದು ಅಗ್ರಹಾರವಾಗಿತ್ತು. ಅನೇಕ ಋತ್ವಿಕರ ವೇದಾಂತಿಗಳ ಆಶ್ರಯವಾಗಿದ್ದ ಈ ಸ್ಥಳಕ್ಕೆ
ದೇಶದ ನಾನಾ ಭಾಗಗಳಿಂದ ಜನರು ವಿದ್ಯಾರ್ಜನೆಗಾಗಿ ಬರುತ್ತಿದ್ದ ಪ್ರತೀತಿಯಿದೆ. ೧೯೭೫ ರ
ಶ್ರಾವಣ ಮಾಸದಲ್ಲಿ , ಶ್ರೀ ಅಶ್ವತ್ಥನಾರಾಯಣ ದೇವರ ಸನ್ನಿಧಾನದಲ್ಲಿ೨೩೮ ವರ್ಷಗಳ
ಇತಿಹಾಸ ಹೊಂದಿದ ಶ್ರೀ ಗುರುರಾಜರ ಬೃಂದಾವನದ ಈ ಸ್ಥಳ ತೃತೀಯ ಮಂತ್ರಾಲಯವೆಂದೇ
ಪ್ರಸಿದ್ದಿ ಪಡೆದಿದೆ.
ಶ್ರೀ ಅಶ್ವತ್ಥನಾರಾಯಣನನ್ನು ಕುಲದೈವ ಎಂದು ನಂಬಿದ ಇಲ್ಲಿಯ ಅನೇಕ ಕುಟುಂಬಗಳು ಈಗ ದೇಶದ ನಾನಾ ಬಾಗಗಳಲ್ಲಿ ನೆಲೆಸಿವೆ. ಇದಲ್ಲದೆ ಈ ಕುಟುಂಬದ ಸಂಬಂಧಿಕರನೆಕರು ಶ್ರೀ ಅಶ್ವತ್ಥನಾರಾಯಣನನ್ನು ತಮ್ಮ ಅರಾಧ್ಯದೈವವೆಂದೇ ನಂಬಿದ್ದಾರೆ. ಇವರು ಕೂಡಾ ಈಗ ಬೇರೆಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಈ ಕುಟುಂಬಗಳ ಹಿರಿಯರು ಆಗಾಗ ಈ ಸನ್ನಿಧಾನಕ್ಕೆ ಬಂದು ನೈವೇದ್ಯವನ್ನು ಕೊಟ್ಟು ತಮ್ಮ ಮೂಲಸೆಳೆತವನ್ನು ಉಳಿಸಿಕೊಂಡಿದ್ದಾರೆ.
ಈ ಎಲ್ಲಾ ಕುಟುಂಬಗಳು ವರ್ಷಕ್ಕೊಮ್ಮೆಯಾದರೂ ಒಟ್ಟು ಸೇರುವಂತಾದರೆ ಅದೆಷ್ಟು ಚೆನ್ನ! ಈ ಚಿಂತನೆ ಸಫಲವಾಗಬೇಕಾದರೆ ಕೂಡಲೇ ಸ್ಪಂದಿಸಿ. ತಮ್ಮ ಹಾಗು ತಮ್ಮ ಸಂಬಂಧಿಕರ ವಿವರಗಳನ್ನು ನನಗೆ ಕಳುಹಿಸಿದಲ್ಲಿ, ವಾರ್ಷಿಕ ಶಿಬಿರ ಒಂದನ್ನು ಈ ಪವಿತ್ರ ಸ್ಥಳದಲ್ಲಿ ಆಯೋಜಿಸೋಣ.
ನನಗೆ ತಿಳಿದಂತೆ, ಅಯೋಧ್ಯಾ, ದೇಶಪಾಂಡೆ, ಮುತಾಲಿಕ್ , ಸಗರ sirname ಇರುವವರು ಸ್ಪಂದಿಸಿದರೆ ಈ ಕೆಲಸ ಬೇಗ ಕೈಗೂಡುವ ಸಾಧ್ಯತೆ ಇದೆ.
ಸಂಬಂಧಿಸಿದವರ ಸ್ಪಂದನೆಗೆ ಕಾಯುತ್ತಿದ್ದೇನೆ.

No comments:
Post a Comment